ಅಣ್ಣಾ ಹಜಾರೆಯವರಿಗೆ ನಾಲ್ಕು ಸಂಸ್ಥೆ ಜತೆ ಸಂಪರ್ಕ ಇದ್ದು, ಅವೆಲ್ಲವನ್ನೂ ಭ್ರಷ್ಟಾಚಾರದ ಆರೋಪದಡಿಯಲ್ಲಿ ವಿಚಾರಣೆ ನಡೆಸಲಾಗಿದೆ. ಆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನಿಯೋಜಿಸಿದ ಜಸ್ಟೀಸ್ ಪಿಬಿ ಸಾವಂತ್ ಸಮಿತಿ, ಅಣ್ಣಾ ಹಜಾರೆ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂಬುದನ್ನು ಪತ್ತೆ ಹಚ್ಚಿರುವುದಾಗಿ ತಿವಾರಿ ಹೇಳಿದರು.
2003ರಲ್ಲಿ ಭ್ರಷ್ಟಾಚಾರದ ತನಿಖೆಗಾಗಿಯೇ ಜಸ್ಟೀಸ್ ಸಾವಂತ್ ಆಯೋಗ ರಚಿಸಿತ್ತು. ನಂತರ 2005 ಫೆಬ್ರವರಿ 22ರಂದು ಆಯೋಗ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿತ್ತು. ವರದಿಯನ್ವಯ ಹಿಂದ್ ಸ್ವರಾಜ್ ಟ್ರಸ್ಟ್ ಅಣ್ಣಾ ಹಜಾರೆ ಹುಟ್ಟುಹಬ್ಬದ ಸಂಭ್ರಮಕ್ಕಾಗಿಯೇ 2.20 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದು, ಇದು ಭ್ರಷ್ಟಾಚಾರದ ಪ್ರಾಕ್ಟೀಸ್ ಆಗಿರುವುದಾಗಿ ಉಲ್ಲೇಖಿಸಿತ್ತು. ಅಲ್ಲದೇ ಅಣ್ಣಾ ಪಾಲುದಾರಿಕೆಯ ಸಂತ ಯಾದವ್ ಬಾಬಾ ಶಿಕ್ಷಣ್ ಪ್ರಸಾರಕ್ ಮಂಡಲ್ ಟ್ರಸ್ಟ್ನ ಆಡಿಟ್ ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಕೊಡದಿರುವ ಬಗ್ಗೆಯೂ ವರದಿ ಆರೋಪಿಸಿದೆ.
ಇಷ್ಟೆಲ್ಲಾ ಆರೋಪ ಹೊತ್ತಿರುವ ಅಣ್ಣಾ ಹಜಾರೆ ಯಾವ ನೈತಿಕತೆ ಆಧಾರದ ಮೇಲೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತೀರಿ ಎಂದು ಪ್ರಶ್ನಿಸಿರುವ ತಿವಾರಿ, ಮೊದಲು ನಿಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಡಿ ಎಂದು ತಿರುಗೇಟು ನೀಡಿದ್ದಾರೆ.
source: http://kannada.webdunia.com/newsworld/news/national/1108/14/1110814015_1.htm
Tuesday, August 16, 2011
Subscribe to:
Comments (Atom)